Header Ads Widget

ಕೋಟ: ನಕಲಿ ಐಟಿ ದಾಳಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್...!!

ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನಕಲಿ ಐಟಿ ದಾಳಿ ಮಾಡುವ ನೆಪದಲ್ಲಿ ದರೋಡೆ ಯತ್ನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು 1) ಸಂತೋಷ್‌ ನಾಯಕ್‌, 2) ದೇವರಾಜ್‌ ಸುಂದರ್‌  ಮೆಂಡನ್‌ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ:
ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಮಣೂರು ಗ್ರಾಮದ ಮಣೂರು ಬಸ್ ನಿಲ್ದಾಣದ ಎದುರು ಇರುವ ಪಿರ್ಯಾದುದಾರರಾದ ಶ್ರೀಮತಿ ಕವಿತಾರವರ  ಮನೆಯ ದರೋಡೆಗೆ ಶಿಫ್ಟ್ ಮತ್ತು ಇನೋವಾ ಕಾರಿನಲ್ಲಿ ಸುಮಾರು 6 -8 ಜನ ಅಪರಿಚಿತರು ಪಿರ್ಯಾದುದಾರ ಮನೆಯ ಗೇಟನ್ನು ಹಾರಿ ಮನೆಗೆ ಅಕ್ರಮ ಪ್ರವೇಶ ಮಾಡಿ, ಮನೆಯ ಬಾಗಿಲು ತೆರೆಯಲು ವಿಫಲ ಯತ್ನ ಮಾಡಿ ಗೇಟನ್ನು ಹಾನಿಗೊಳಿಸಿ ಅವರು ಬಂದ ಕಾರಿನಲ್ಲಿ ವಾಪಾಸ್ಸು ಹೋದ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಯ ಬಗ್ಗೆ   ದಿವಾಕರ ಪಿ.ಎಮ್‌ ಸಿ.ಪಿ.ಐ ಬ್ರಹ್ಮಾವರರವರ ನೇತೃತ್ವದಲ್ಲಿ ಕೋಟ ಠಾಣಾ ಪಿ.ಎಸ್.ಐ ಗುರುನಾಥ ಬಿ ಹಾದಿಮನಿ ಹಾಗೂ ಶ್ರೀಮತಿ ಸುಧಾಪ್ರಭು ಮತ್ತು ಹಿರಿಯಡ್ಕ ಠಾಣಾ ಪಿಎಸ್‌ಐ ಮಂಜುನಾಥ ರವರನ್ನು ಒಳಗೊಂಡ ಪ್ರತ್ಯೇಕ 03 ತಂಡಗಳನ್ನು ರಚಿಸಿದ್ದು, ವಿವಿಧ ಆಯಾಮಗಳಲ್ಲಿ ಆರೋಪಿತರ ಪತ್ತೆಗಾಗಿ ಬೆಂಗಳೂರು ಮತ್ತು ಮಹಾರಾಷ್ಟ್ರ ಕ್ಕೆ ಮತ್ತು ಸ್ಥಳೀಯವಾಗಿ ಶೋಧನ ಕಾರ್ಯ ಕೈಗೊಂಡು ಆರೋಪಿಗಳಾದ 1) ಸಂತೋಷ್‌ ನಾಯಕ್‌(45), ಚಿಕ್ಕಮಗಳೂರು ವಾಸ ಮುಂಬೈ, 2) ದೇವರಾಜ್‌ ಸುಂದರ್‌  ಮೆಂಡನ್‌(46), ಪೊಲಿಪು ಕಾಪು ವಾಸ ಮುಂಬೈ ಇವರನ್ನು ಪತ್ತೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಗಾಗಿರುತ್ತಾರೆ.

ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ಜಪ್ತಿ ಮಾಡಿ, ಉಳಿದ ಆರೋಪಿತರ ಪತ್ತೆಗಾಗಿ ಹುಡುಕಾಟ ನಡೆದಿರುತ್ತದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿತರು ನಕಲಿ ಐಟಿ ದಾಳಿ ಮಾಡುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ ಮಾಡುವ ಸಂಚು ರೂಪಿಸಿ ಮಹಾರಾಷ್ಟ್ರದಿಂದ ಬಂದಿರುತ್ತಾರೆ. ಇದಕ್ಕೆ ಜಿಲ್ಲೆಯ ಸ್ಥಳಿಯ ಆರೋಪಿತರು ಕೂಡ ಕೃತ್ಯದಲ್ಲಿ ಭಾಗಿಯಾಗಿರುತ್ತಾರೆ.

ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ಮುಂದುವರಿಸಲಾಗಿದೆ.

  

Post a Comment

0 Comments