Header Ads Widget

ಉಡುಪಿ: ಎರಡು ತಂಡಗಳ ನಡುವೆ ಗ್ಯಾಂಗ್ವ್ ವಾರ್ : ವಿಡಿಯೋ ವೈರಲ್..!!

ಉಡುಪಿ: ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದು ತಡವಾಗಿ ತಿಳಿದು ಬಂದಿದೆ.

ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು‌ ಜಗಳ ಮಾಡಿಕೊಂಡು ಕಾರಿನಲ್ಲಿಯೇ ಹೊಡೆದಾಟ ಮಾಡಿಕೊಂಡಿದ್ದಾರೆ ಎಂದು ತಿಳಿಯಲಾಗಿದೆ.

ಮೇ 18ರಂದು ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿರುವ ಈ ಘಟನೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.

ಕಾಪು ಮೂಲದ ಎರಡು ಮುಸ್ಲಿಂ ಯುವಕರ ತಂಡದ ನಡುವೆ ಜಗಳ ನಡೆದಿದೆ.ಗರುಡ ಗ್ಯಾಂಗ್ ಮತ್ತು ಶರೀಫ್ ನಡುವೆ ಹೊಡೆದಾಟ ಸಂಭವಿಸಿದೆ.ನಂತರ ಕಾರುಗಳ ನಡುವೆ ಢಿಕ್ಕಿ ಹೊಡೆದುಕೊಂಡು ಹೊಡೆದಾಟ ನಡೆಸಿದ್ದಾರೆ.


ಈ ಗಲಾಟೆಯಲ್ಲಿ ಒಬ್ಬ ಯುವಕ ಗಂಭೀರ ಗಾಯಗೊಂಡಿದ್ದಾನೆ. ನಂತರ ಆಸ್ಪತ್ರೆಗೆ ಆ ಯುವಕನನ್ನು ದಾಖಲಿಸಿದ್ದಾರೆ.

ಉಡುಪಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು, ಆಶೀಕ್ ಮತ್ತು ರಾಕೀಬ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Post a Comment

0 Comments