Header Ads Widget

ಮಲ್ಪೆ ಸಮುದ್ರದಲ್ಲಿ ಮೂರು ಮಂದಿ ಪ್ರವಾಸಿಗರು ಮುಳುಗಡೆ : ರಕ್ಷಿಸಿದ ಲೈಫ್ ಗಾರ್ಡ್ಸ್...!!

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ಪ್ರವಾಸಕ್ಕೆ ಬಂದಿದ್ದ ಮೂವರು ಪ್ರವಾಸಿಗರನ್ನು ಬೀಚ್ ನ ಲೈಫ್ ಗಾರ್ಡ್ಸ್ ತಂಡ ರಕ್ಷಣೆ ಮಾಡಿದ ಘಟನೆ ಇಂದು ನಡೆದಿದೆ.

ಬೆಂಗಳೂರು ಮೂಲದ ನಾಗಸಂದ್ರ ನಿವಾಸಿ ಪ್ರದೀಪ್ ಎಂಬವರು ಮದ್ಯಪಾನ ಸೇವಿಸಿ ನೀರಿಗೆ ಇಳಿದಿದ್ದರು.ಪ್ರದೀಪ್ ನೀರಿನಲ್ಲಿ ಮುಳುಗುವಾಗ ಆತನನ್ನು ಮಲ್ಪೆ ಬೀಚ್ ನ ಲೈಫ್ ಗಾರ್ಡ್ಸ್ ರಕ್ಷಣೆ ಮಾಡಿದ್ದಾರೆ.

ನಂತರ ಇಬ್ಬರು ಪ್ರವಾಸಿಗರು ಸ್ನಾನಕ್ಕೆಂದು ನೀರಿಗೆ ಇಳಿದಿದ್ದರು.ಆಗ ಅವರನ್ನು ಲೈಫ್ ಗಾರ್ಡ್ಸ್ ರಕ್ಷಿಸಿದ್ದಾರೆ.ಹೊಸೂರು ನಿವಾಸಿಗಳಾದ ನಾಗೇಶ್ ವೆಂಕಟೇಶನ್ ಹಾಗೂ ರಮೇಶ್ ಎಂಬ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

Post a Comment

0 Comments