Header Ads Widget

ಶಾಸಕ ಲಾಲಾಜಿ ಮೆಂಡನ್ ನೇತೃತ್ವದ ಯಶಸ್ವಿಯಾಗಿ ನಡೆದ ಬೃಹತ್ ಸ್ವಚ್ಛತಾ ಕಾರ್ಯಕ್ರಮ : ಕ್ಷೇತ್ರದ 9 ಕಡೆ 3500 ಮಂದಿ ಭಾಗಿ....!!

       
ಕಾಪು : ಇಂದು ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ನೇತೃತ್ವದಲ್ಲಿ ಕ್ಷೇತ್ರದ 9 ಪ್ರಮುಖ ಕೇಂದ್ರದಲ್ಲಿ  ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಆಶಯದಂತೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಬೆಳಿಗ್ಗೆ 8.30  ಗಂಟೆಗೆ ಏಕಕಾಲದಲ್ಲಿ ಚಾಲನೆಗೊಂಡು 12.00 ಗಂಟೆ ತನಕ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ  ನಡೆಯಿತು.

ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರ ನೇತೃತ್ವದಲ್ಲಿ ಪ್ರತಿವರ್ಷ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದ್ದು ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಶಾಲಾ ಕಾಲೇಜುಗಳ ಸಹಬಾಗಿತ್ವದಲ್ಲಿ ನಡೆಯುತ್ತಿದ್ದು ಈ ಭಾರಿ ಕ್ಷೇತ್ರ 9 ಕಡೆಗಳಲ್ಲಿ ಸುಮಾರು 3500 ಮಂದಿ ಭಾಗವಹಿಸಿದರು.

ಕಾಪು ಬೀಚ್ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ  ಶಾಸಕ ಲಾಲಾಜಿ ಆರ್ ಮೆಂಡನ್ ಚಾಲನೆ ನೀಡಿದರು ಕಾಪು ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಸುವರ್ಣ ಉಪಸ್ಥಿತರಿದ್ದರು.

ಕಟಪಾಡಿ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಹಾಗೂ svs ವಿದ್ಯಾಸಂಸ್ಥೆಯ ಸತೇoದ್ರ ಪೈ, ಹಿರಿಯಡ್ಕ ವ್ಯಾಪ್ತಿಯಲ್ಲಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರು ಉದಯ ಕುಮಾರ್ ಶೆಟ್ಟಿ, ಕುಕ್ಕೆಹಳ್ಳಿ ವ್ಯಾಪ್ತಿಯಲ್ಲಿ ಕರಾವಳಿ ಪ್ರಾಧಿಕಾರ ಅಧ್ಯಕ್ಷರು ಮಟ್ಟಾರು ರತ್ನಾಕರ್ ಹೆಗ್ಡೆ, ಪೆರ್ಡೂರ್ ವ್ಯಾಪ್ತಿಯಲ್ಲಿ ಕರ್ನಾಟಕ ಬಸ್ಸು ಮಾಲಕರ ಸಂಘದ ಅಧ್ಯಕ್ಷರು ಕುಯಿಲಾಡಿ ಸುರೇಶ್ ನಾಯಕ್, ಬೆಳ್ಳೆ ವ್ಯಾಪ್ತಿಯಲ್ಲಿ ಕಾಪು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಶೈಲಾ ಮುರುಗೋಡ, ಶಿರ್ವ ವ್ಯಾಪ್ತಿಯಲ್ಲಿ ಶಿರ್ವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಸಿ, ಪಡುಬಿದ್ರೆ ವ್ಯಾಪ್ತಿಯಲ್ಲಿ ಕಾಪು ವೃತ್ತ ನೀರಿಕ್ಷಕರಾದ ಶ್ರೀಯುತ ಪೂವಯ್ಯ ಹಾಗೂ ಉಚ್ಚಿಲ ವ್ಯಾಪ್ತಿಯಲ್ಲಿ ಕಾಪು ಯೋಜನಾ ಪ್ರಾಧಿಕಾರ ಅಧ್ಯಕ್ಷರು ಸುಧಾಮ ಶೆಟ್ಟಿ ಮತ್ತು ಉಚ್ಚಿಲ ಮೊಗವೀರ ಹಿತಾಸಾಧನ ಸಮಿತಿ ಅಧ್ಯಕ್ಷರು ಸರ್ವೋತ್ತಮ ಕುಂದರ್ ಚಾಲನೆ ನೀಡಿದರು.

ಆಯಾ ಸ್ವಚ್ಛತಾ ಕೇಂದ್ರಗಳಿಗೆ ಸಂಬಂಧಪಟ್ಟಂತೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಗ್ರಾಮ ಪಂಚಾಯತ್ ಆಡಳಿತ ವರ್ಗ, ಸ್ವಯಂ ಸೇವಾ ಸಂಘ - ಸಂಸ್ಥೆಯವರು, ಎಲ್ಲಾ ಜನಪ್ರತಿನಿದಿಗಳು, ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರು, ಶಾಲಾ ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು,  ಸ್ವಚ್ಛತಾ ಕಾರ್ಯಕ್ರಮಕ್ಕೆ ಯಶಸ್ವಿಗೊಳಿಸಿದ ಎಲ್ಲರಿಗೂ ಈ ಮೂಲಕ ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಧನ್ಯವಾದಗಳನ್ನು ತಿಳಿಸಿದ್ದಾರೆ.

Post a Comment

0 Comments