Header Ads Widget

"ಹೋಗಿ ಸಾಯಿ'’ ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ : ಹೈಕೋರ್ಟ್...!!

ಪಂಜಾಬ್ :  2015 ಮಾರ್ಚ್ 22ರಲ್ಲಿ ಪಂಜಾಬ್‌ನ ಬರ್ನಾಲಾ ನಿವಾಸಿಯೊಬ್ಬರು ಮಗನಿಗೆ ವಿವಾಹ ಮಾಡಿದ್ದರು. ಆದರೆ, 3 ತಿಂಗಳಲ್ಲಿ ಮಗ-ಸೊಸೆ ನಡುವೆ ಜಗಳವಾಗಿ ಪತ್ನಿ, ಗಂಡನಿಗೆ ಹೋಗಿ ಸಾಯಿ ಎಂದು ಬೈದಳು. ಅಷ್ಟಕ್ಕೆ ಗಂಡ ರೂಂಗೆ ಹೋಗಿ ಬೆಂಕಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಪತ್ನಿಗೆ 7, ವರ್ಷ ಜೈಲು ಶಿಕ್ಷೆ, 1.25 ಲಕ್ಷ ದಂಡ ವಿಧಿಸಿತ್ತು.

ಆದರೀಗ ಹೈಕೋರ್ಟ್ ‘ಹೋಗಿ ಸಾಯಿ’ ಅಂದರೆ ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಮಹತ್ವದ ತೀರ್ಪು ನೀಡಿ ಆಕೆಗೆ ಶಿಕ್ಷೆಯಿಂದ ಮುಕ್ತಿಗೊಳಿಸಿದೆ.

Post a Comment

0 Comments