Header Ads Widget

ಬಿಲ್ಲವರ ಅಸೋಸಿಯೇಶನ್ ಮುಂಬಯಿ 90ನೇ ವಾರ್ಷಿಕ ಮಹಾಸಭೆ : ಗದ್ದಲದಲ್ಲಿ ಆರಂಭವಾದ ಮಹಾಸಭೆ ನಂತರ ಶಾಂತಿಯುತವಾಗಿ ಮುಕ್ತಾಯ...!!


ಮುಂಬಯಿ:
ಸೆ.25ರಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ 90ನೇ ವಾರ್ಷಿಕ ಮಹಾಸಭೆ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ.ಅಮೀನ್ ಅಧ್ಯಕ್ಷತೆಯಲ್ಲಿ ಬಿಲ್ಲವರ ಭವನದಲ್ಲಿ ಜರಗಿತು.

ಮಹಾಸಭೆಯು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.ವರದಿ ವರ್ಷದಲ್ಲಿ ದೈವಾಧೀನರಾದ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ಸ್ವಾಗತಿಸಿ, ನಿರೂಪಿಸಿದ್ದರು. ಜತೆ ಕಾರ್ಯದರ್ಶಿ ವಿಶ್ಚನಾಥ ಆರ್. ತೋನ್ಸೆ ಗತವರ್ಷದ ಮಹಾಸಭೆಯ ವರದಿ ಮಂಡಿಸಿ, ಸರ್ವಾನುಮತದಿಂದ ಅಂಗೀಕರಿಸಲಾಯಿತು. 

ಜತೆ ಕಾರ್ಯದರ್ಶಿಗಳದ ಕೇಶವ ಕೆ. ಕೋಟ್ಯಾನ್ , ಜಯ ವಿ. ಪೂಜಾರಿ, ಗೌರವ ಕೋಶಾಧಿಕಾರಿ ಹರೀಶ್ಚಂದ್ರ ಜಿ. ಕುಂದಾರ್ ಮತ್ತು ಸಮಿತಿಯ ಸದಸ್ಯರಾದ ರವಿ. ಎಸ್.ಸನಿಲ್ 2021-22ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಾಪತ್ರಸ ಬಗ್ಗೆ ನಿಯಮಾನುಸಾರ ಬಂದ ಪತ್ರಗಳಿಗೆ ಸ್ವಷ್ಟೀಕರಣ ನೀಡಿದ್ದರು. ಸದಸ್ಯರ ಅನುಮೋದನೆಯೊಂದಿಗೆ 2021-22ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲ್ಪಟ್ಟ ಲೆಕ್ಕಪತ್ರಗಳನ್ನು ಅಂಗೀಕರಿಸಲಾಯಿತು.

ಅಶ್ವಜಿತ್ ಅಸೋಸಿಯೇಟ್ಸ್ ನ ಚಾರ್ಟಡ್ ಅಕೌಂಟೆಂಟ್ಸ್ ಅವರನ್ನು 2022-23ನೇ ಅವಧಿಗೆ ಲೆಕ್ಕಪರಿಶೋಧಕರಾಗಿ ಸರ್ವಾನುಮತದಿಂದ ಮರು ಆಯ್ಕೆ ಮಾಡಲಾಯಿತು. ಕೆಲವು ಸದಸ್ಯರು ಬೆಳಗ್ಗೆ ಸಭೆಯು ಪ್ರಾರಂಭವಾಗುತ್ತಲೇ ಗದ್ದಲ ಎಬ್ಬಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಶಾಂತ ರೀತಿಯಲ್ಲಿ ಸಭೆಯನ್ನು ನಡೆಸುವಂತೆ ಮನವಿ ಮಾಡಿದರು.ಆದರೂ ಸದಸ್ಯರ ಗದ್ದಲ ಮುಂದುವರಿಯಿತು. 

ರವಿ ಎಸ್.ಸನೀಲ್, 2022-23ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲ್ಪಟ್ಟ ಲೆಕ್ಕ ಪತ್ರಗಳನ್ನು ಪುರೋಷತ್ತಮ್ ಎಸ್ ಕೋಟ್ಯಾನ್ ಅವರ ಸೂಚನೆ ಹಾಗೂ ರಿತೇಶ್ ಪುಜಾರಿ ಅವರ ಅನುಮೋದನೆಯೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಯಿತು.ರಾಜ ವಿ ಸಾಲ್ಯಾನ್,ವರದ ಉಳ್ಳಾಲ್ ಹಾಗೂ ಇನ್ನೂ ಬಿಲ್ಲವ ಮುಖಂಡರು ಮತ್ತು ಆಂತರಿಕ ಲೆಕ್ಕಪರಿಶೋಧಕರು ಹಾಗೂ ಸ್ಥಳೀಯ ಕಚೇರಿಗಳ ಕಾರ್ಯಾಧ್ಯಕ್ಷರು, ಅಸೋಸಿಯೇಶನ್ ನ ಪದಾಧಿಕಾರಿಗಳು, ಕಾರ್ಯಾಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಹರೀಶ ಜಿ. ಸಾಲ್ಯಾನ್ ವಂದಿಸಿದರು.ಬಳಿಕ ಶಾಂತಿಯುತವಾಗಿ ವಾರ್ಷಿಕ ಮಹಾಸಭೆಯು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

ಬಿಲ್ಲವ ಮುಖಂಡ ದಿ. ಜಯ ಸುವರ್ಣ ಅವರ ಮೂರ್ತಿಯ ವಿಚಾರದಲ್ಲಿ ವಿವಾದ ಆರಂಭವಾಗಿತ್ತು.ಆ ವಿವಾದ ಮುಂಬಯಿ ಬಿಲ್ಲವ ಸಮುದಾಯದಲ್ಲಿ ಎರಡು ಗುಂಪುಗಳಾಗಿ ಭಾಗವಾಯಿತು.ಇಲ್ಲಿ ಗೊಂದಲ ಮತ್ತು ವಿವಾದಕ್ಕೆ ಕಾರಣವಾಯಿತು. ಇದರಲ್ಲಿ ಒಂದು ಗುಂಪು ಈಗಿನ ಅಧ್ಯಕ್ಷರರಾದ ಹರೀಶ್ ಜಿ‌ ಅಮೀನ್  ಅವರನ್ನು ಅಧ್ಯಕ್ಷ ಸ್ಥಾನದಿಂದ ರಾಜಿನಾಮೆ ನೀಡುವಂತೆ ಒತ್ತಾಯಿಸಿತು ಎಂದು ಮಾಹಿತಿ ತಿಳಿದು ಬಂದಿದೆ.

ಆದರೆ ಇನ್ನೊಂದು ಗುಂಪು ಹರೀಶ್ ಅಮೀನ್ ಅವರಿಗೆ ಬೆಂಬಲ ನೀಡಿತು.ಮಹಾಸಭೆಯಲ್ಲಿ ಗದ್ದಲ ಆಗುವ ಹಿನ್ನೆಲೆಯಲ್ಲಿ ಮೊದಲೇ ಪೊಲೀಸರಿಗೆ ಬಿಲ್ಲವ ಮುಖಂಡರು ತಿಳಿಸಿದ್ದರು.ಆದ್ದರಿಂದ ಪೊಲೀಸರು ಅಲ್ಲಿ ಸಭೆ ನಡೆಯುವಾಗ ಉಪಸ್ಥಿತರಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಮಹಾಸಭೆಯ ಗದ್ದಲದಿಂದ ನಡೆಯುತ್ತಿರುವಾಗ ಬಿಲ್ಲವ ಮುಖಂಡ ರಿತೇಶ್ ಪೂಜಾರಿಯವರು ಮೊದಲು ಎದ್ದು ನಿಂತು ಅಧ್ಯಕ್ಷರಿಗೆ ಮಾತನಾಡಲು ಅವಕಾಶ ಕೊಡಿ ಎಂದು ಹೇಳಿದ್ದರು. ನಂತರ ಕೆಲವರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ವಿಚಾರ ಏನೇ ಇರಲಿ ಬಿಲ್ಲವ ಸಮುದಾಯದವರು ಒಗ್ಗಾಟ್ಟಾಗಿ ತಮ್ಮ ಸಮಸ್ಯೆಯನ್ನು ಅವರೇ ಪರಿಹರಿಸಿಕೊಳ್ಳಲಿ.ಇನ್ನೂ ಬಿಲ್ಲವ ಸಮುದಾಯದವರಿಂದ ಸಮಾಜಕ್ಕೆ ಒಳ್ಳೆಯ ಕೆಲಸಗಳಾಗಲಿ ಎಂದು ಕೆಲವರ ಅಭಿಪ್ರಾಯ.


Post a Comment

0 Comments