Header Ads Widget

ಬಾಂಬೆ ಬಂಟ್ಸ್ ಅಸೋಸಿಯೇಶನ್ ಯುವ ವಿಭಾಗದ ಆಶ್ರಯದಲ್ಲಿ ಯುವಿಕಾ-2022 : ಯುವೋತ್ಸವ..!!



ಮುಂಬಯಿ:
ಒತ್ತಡದ ಜೀವನಕ್ಕೆ ಸಾಂಸ್ಕ್ರತಿಕ ಉತ್ಸವ ಅಗತ್ಯ. ಯುವ ಜನಯು ಮಂದೆ ಬಂದು ಸಂಘಟನೆಯಲ್ಲಿ ಸಕ್ರಿಯವಾಗಿರಬೇಕು. ಈ ನಿಟ್ಟಿನಲ್ಲಿ ಬಂಟ್ಸ್ ಅಸೋಸಿಯೇಶನ್ ಯುವ ವಿಭಾಗದವು ಸದಾ ಕ್ರೀಯಾಶೀಲವಾಗಿ ಯುವಜನರನ್ನು ಒಂದೇ ವೇದಿಕೆಯಡಿ ಸೇರಿಸುವಲ್ಲಿ ಪ್ರಯತ್ನಿಸುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನರು ಇತ್ತಡದ ಜೀವನದಲ್ಲಿದ್ದು, ಇಂತಹ ಸಮಾಜಪರ ಬದಲಾವಣೆ ತರಬಹುದು ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಚರಾದ ಮುರುಳಿ ಕೆ.ಶೆಟ್ಟಿ ತಿಳಿಸಿದ್ದರು.

ಸೆ.24ರಂದು ನವಮುಂಬಯಿ ಬಂಟ್ಸ್ ಸೆಂಟರ್ ಸಭಾಗೃಹದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಶನ್ ಯುವ ವಿಭಾಗದ ಆಶ್ರಯದಲ್ಲಿ ಯುವಿಕಾ-2022 ಸಾಂಸ್ಕತಿಕ ಯುವೋತ್ಸವ ಜರಗಿತು. ಬಳಿಕ ಯುವೋತ್ಸವದಲ್ಲಿ ದೀಪಪ್ರಜ್ವಲಿಸಿ ಉದ್ಘಾಟಿಸಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಶೈಕ್ಷಣಿಕ, ಸಾಂಸ್ಕತಿಕ, ಧಾರ್ಮಿಕ, ಸಾಹಿತ್ಯ ಕ್ಷೇತ್ರಗಳಲ್ಲಿಯೂ ಅಪಾರ ಸಾಧನೆ ಮಾಡುತ್ತಿದೆ. ಅಸೋಸಿಯೇಶನ್ ನ ಸಮಾಜಪರ ಯೋಜನೆಗಳನ್ನು ಸದಸ್ಯರ ಮನೆ ಮನೆಗಳಿಗೆ ತಲುಪಿಸುವಲ್ಲಿ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಕಾರ್ಯ ಅಭಿನಂದನೀಯ ಎಂದರು. ಮುಖ್ಯ ಅತಿಥಿ ಯುವ ಉದ್ಯಮಿ, ಭವಾನಿ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಜೀಕ್ಷಿತ್ ಕೆ. ಶೆಟ್ಟಿ ಶುಭ ಹಾರೈಸಿದರು. 

ಯುವ ಉದ್ಯಮಿ ಹೇರಂಬಾ ಇಂಡಸ್ಟ್ರೀಸ್ ಲಿ. ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ರಾಜ್ ಸದಾಶಿವ ಶೆಟ್ಟಿ ,ಯುವ ಉದ್ಯಮಿ ಕೃಷ್ಣ ಪ್ಯಾಲೇಸ್ ನಿರ್ದೇಶಕ ಸೌರಭ್ ಕೆ. ಶೆಟ್ಟಿ ಮಾತನಾಡಿದರು ಹಾಗೂ  ಯುವ ಉದ್ಯಮಿ ಮೆಕಾಯ್ ಗ್ರೂಪ್ ನಿರ್ದೇಶಕ ಆದಿತ್ಯ. ಕೆ.ಶೆಟ್ಟಿ ಶುಭ ಹಾರೈಸಿದ್ದರು.

ಯುವ ವಿಭಾಗದ ಕಾರ್ಯಾಧ್ಯಕ್ಷ ಶಶಿಕಾಂತ ರೈ ಸ್ವಾಗತಿಸಿದರು. ಹಾಗೇ ಈ ಸಂದರ್ಭದಲ್ಲಿ ಶಶಿಕಾಂತ್ ರೈ ಹಾಗೂ ಸಂಘದ ಪದಾಧಿಕಾರಿಗಳು ಅತಿಥಿಗಳನ್ನು ಶಾಲು ಹೊದಿಸಿ, ಸ್ಮರಣಿಕೆಯನ್ನು ಕೊಟ್ಟು ಸನ್ಮಾನಿಸಿದರು. ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


Post a Comment

0 Comments