ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಂದನವನ ವಸತಿ ಗೃಹಕ್ಕೆ ಭಿನ್ನಮತೀಯ ಜೋಡಿಗಳು ಬಂದ ವಿಷಯ ತಿಳಿದು ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ ಘಟನೆ ಇಂದು ನಡೆದಿದೆ.
ಉಪ್ಪುಂದ ಲಾಡ್ಜ್ ಒಂದಕ್ಕೆ ಅಮೀರ್ ಅಲಿ(45) ಉಳ್ಳಾಲ ಬೈಲು, ಉಳ್ಳಾಲ, ದ.ಕ ಜಿಲ್ಲೆ ಹಾಗೂ ಯುವತಿಯೊಂದಿಗೆ(28) ಉಳ್ಳಾಲ ಎಂಬವರೊಂದಿಗೆ ಆಗಮಿಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ಅಮೀರ್ ಅಲಿ ಗುಜರಿ ವ್ಯಾಪಾರಿಯಾಗಿದ್ದು, ದ.ಕ ಜಿಲ್ಲೆಯ ತೊಕ್ಕುಟ್ಟುವಿನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿರುತ್ತಾನೆ. ಶ್ರಾವಣ್ಯ ಅವನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆಯ ಒಪ್ಪಿಗೆಯಿಂದಲೇ ಲಾಡ್ಜ್ ಗೆ ಕರೆತಂದಿರುವುದಾಗಿ ತಿಳಿದುಬಂದಿರುತ್ತದೆ.