ಮನೆಯ ಬಾಗಿಲು ಮುರಿದು ಮಹಿಳೆ ಮೇಲೆ ಹಲ್ಲೆ ನಡೆಸಿ, ಇಬ್ಬರು ಮಕ್ಕಳ ಅಪಹರಣ..!!

ಕುಂಬಳೆ : ಕೆಲವು ವ್ಯಕ್ತಿಗಳು ಬಂದು ಮನೆಯ ಬಾಗಿಲು ಮುರಿದು ಒಳನುಗ್ಗಿ ಮಹಿಳೆಗೆ ಹಲ್ಲೆಗೈದು ಇಬ್ಬರು ಮಕ್ಕಳನ್ನು ಅಪಹರಿಸಿದ ಘಟನೆ ಬಂದ್ಯೋಡ್‌ನ‌ಲ್ಲಿ ಸಂಭವಿಸಿದೆ.

ಕುಂಬಳೆಯ ಬಂದ್ಯೋಡ್‌ ನಿವಾಸಿ ಅಬ್ದುಲ್‌ ರಹ್ಮಾನ್‌ ಅವರ ಪುತ್ರಿ ಫಾತಿಮ (29) ಅವರಿಗೆ ಹಲ್ಲೆ ಮಾಡಿ ಫಾತಿಮ ಅವರ ಮೂರು ಹಾಗೂ ಎಂಟು ವರ್ಷದ ಇಬ್ಬರು ಮಕ್ಕಳನ್ನು ಅಪಹರಿಸಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

0/Post a Comment/Comments

Previous Post Next Post