ಕಾರ್ಕಳ : ಚೆಕ್ ಅಮಾನ್ಯ ಪ್ರಕರಣ : ಆರೋಪಿಗೆ ಶಿಕ್ಷೆ ಪ್ರಕಟ..!!

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ಜೆಎಂಎಫ್ ಸಿ ನ್ಯಾಯಾಲಯ ಚೆಕ್ ಅಮಾನ್ಯ ಪ್ರಕರಣದಲ್ಲಿ ಹೆಬ್ರಿಯ ಮೂಲದ ಆರೋಪಿಗೆ ಶಿಕ್ಷೆ ಪ್ರಕಟ ಮಾಡಿದೆ .

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಬ್ರಿ ಮಠದಬೆಟ್ಟು ಗೋಪಾಲ್ ನಾಯ್ಕ್ ಅವರ ಪುತ್ರ ಪ್ರಜ್ವಲ್ ಜಿ ನಾಯ್ಕ  ಈತ ಹೆಬ್ರಿ ತಾಲೂಕಿನ ಆರ್ಡಿ  ಗ್ರಾಮದ ಕೆರ್ಜಾಡಿ ದೊಡ್ಮನೆ ವಿಕ್ರಮ್ ಹೆಗ್ಡೆ ಇವರ ಬಳಿ 2016ರಲ್ಲಿ 4.50ಲಕ್ಷ ಸಾಲವಾಗಿ ಪಡೆದು ಹಿಂದೆ ತಿರುಗಿಸದೆ.

ಸಾಲದ ಮರುಪಾವತಿಗಾಗಿ ಚೆಕ್ ಅನ್ನು  ನೀಡಿದ್ದು.ಬ್ಯಾಂಕ್ ನಲ್ಲಿ ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ  ವಿಕ್ರಮ್ ಹೆಗ್ಡೆ ಆರೋಪಿ ಪ್ರಜ್ವಲ್ ನಾಯ್ಕ್ ಇವರ ಮೇಲೆ ಕಾರ್ಕಳ ನ್ಯಾಯಾಲಯದಲ್ಲಿ ಚೆಕ್ ಕೇಸ್‌ ಹಾಕಿದ್ದಾರೆ .ನ್ಯಾಯಾಲಯದಲ್ಲಿ ಸುದೀರ್ಘ ವಾದ ಪ್ರತಿವಾದ ನಡೆದ ನಂತರ .ಆರೋಪಿ ಪ್ರಜ್ವಲ್ ನಾಯ್ಕ್ ಈತನಿಗೆ ಶಿಕ್ಷೆ ಪ್ರಕಟಗೊಳಿಸಿದ್ದಾರೆ.

ಸಾಲವಾಗಿ ಪಡೆದ ಹಣ ಮೊತ್ತ 4.50ಲಕ್ಷ ಹಾಗೂ 1ಲಕ್ಷ ದಂಡ.ಮತ್ತು ಸರಕಾರಕ್ಕೆ 5ಸಾವಿರ ಒಟ್ಟು 5ಲಕ್ಷದ ಐವತ್ತ 5 ಸಾವಿರ ಮೊತ್ತವನ್ನು 1ತಿಂಗಳೊಳಗೆ ಪಾವತಿಸಬೇಕು ತಪ್ಪಿದಲ್ಲಿ 6ತಿಂಗಳ ಕಾಲ ಸಾದಾ ಸಜೆ ವಿಧಿಸಿದೆ. ವಿಕ್ರಂ ಹೆಗ್ಡೆ ಪರ ಹೆಬ್ರಿಯ ಖ್ಯಾತ ನ್ಯಾಯವಾದಿ ರತನ್ ಕುಮಾರ್ .ಎಚ್ ವಾದಿಸಿದ್ದಾರೆ .

0/Post a Comment/Comments

Previous Post Next Post